ಮೂಡಲಗಿ: ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆಯ ಭವ್ಯ ಮೇರವಣಿಗೆ….
December 20, 2021 2021-12-21 8:32ಮೂಡಲಗಿ: ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆಯ ಭವ್ಯ ಮೇರವಣಿಗೆ….

ಮೂಡಲಗಿ: ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆಯ ಭವ್ಯ ಮೇರವಣಿಗೆ….
ಮೂಡಲಗಿ: ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 28ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ಉತ್ಸವ ಹಾಗೂ ಭವ್ಯ ಮೆರವಣಿಗೆಗೆ ಸೋಮವಾರ ಸಂಜೆ ಜರುಗಿತು.
ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಹೊತ್ತಿರುವ ಆನೆಯ ಅಂಬಾರಿಗೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಷಂಬಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಪಟ್ಟಣದ ಅಯ್ಯಪ್ಪ ಸನ್ನಿಧಾನದ ರವಿ ಗುರುಸ್ವಾಮಿಗಳು ಹಾಗೂ ಗುರುಸ್ವಾಮಿಗಳು, ಮಾಲಾಧಾರಿಗಳು ಸೇರಿದಂತೆ ಅನೇಕರು ಆನೆಯ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯ ಜಂಬೂ ಸವಾರಿಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡ ನಾಡು-ನುಡಿ ಸಂಸ್ಕೃತಿ ಅನಾವರಣಗೊಳಿಸುವ ಐದು ಕಲಾತಂಡಗಳು, ಅಯ್ಯಪ್ಪ ಸ್ವಾಮಿ ಸೇರಿದಂತೆ ವಿವಿಧ ಮಹಾತ್ಮರ ವೇಷಭೂಷಣ, ಅಯ್ಯಪ್ಪ ಕನ್ನಿ ಸ್ವಾಮಿಗಳ ಕುಂಬಮೇಳದೊAದಿಗೆ ಅಯ್ಯಪ್ಪ ಸ್ವಾಮಿಯ ವೈಭವದ ಉತ್ಸವಕಕ್ಕೆ ಮೆರಗು ನೀಡಿದವು.
ಮೇರವಣಿಗೆಯು ಪಟ್ಟಣದ ಶ್ರೀ ಶಿವಬೋಧರಂಗ ಮಠ, ಯಲ್ಲಮ್ಮ ದೇವಸ್ಥಾ, ಸಂಗಪ್ಪಣ್ಣ ವೃತ್ತ, ಕಲ್ಮೇಶ್ವರ, ಚನ್ನಮ್ಮ ವೃತ್ತ, ಕರೇಮ್ಮಾದೇವಿ ವೃತ್ತ ಮತ್ತು ಬಸವೇಶ್ವರ ವೃತ್ತದ ಮೂಲಕ ಬಸವ ಮಂಟಪದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿದಾನಕ್ಕೆ ಸೇರಿತು.

ಪಟ್ಟಣದಲ್ಲಿ ಅಯ್ಯಪ್ಪ ಸ್ವಾಮಿಯ ಜಂಬೂ ಸವಾರಿ ವಿಕ್ಷಣೆಗೆ ಸುತ್ತ ಮುತ್ತಲಿನ ಗ್ರಾಮಗಳ ಹಾಗೂ ಮೂಡಲಗಿ ಪಟ್ಟಣದ ಜನರು ತಂಡೋಪ ತಂಡವಾಗಿ ಆಗಮಿಸಿ ಜಂಬೂ ಸವಾರಿ ವೀಕ್ಷಿಸಿದರು.
ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಕರುನಾಡು ಸೈನಿಕ ಕೇಂದ್ರ ಶಿಬಿರಾಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆ ಸುಗಮವಾಗಿ ಸಾಗಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದರು.