ರಾಪ ಸ್ಟಾರ ಸಿಂಗರ ಬಿಗ್ ಬಾಸ ಜಯಶಾಲಿ ಚಂದನಶೆಟ್ಟಿ:ಘಟಪ್ರಭಾ
January 22, 2022 2022-01-22 8:36ರಾಪ ಸ್ಟಾರ ಸಿಂಗರ ಬಿಗ್ ಬಾಸ ಜಯಶಾಲಿ ಚಂದನಶೆಟ್ಟಿ:ಘಟಪ್ರಭಾ

ರಾಪ ಸ್ಟಾರ ಸಿಂಗರ ಬಿಗ್ ಬಾಸ ಜಯಶಾಲಿ ಚಂದನಶೆಟ್ಟಿ:ಘಟಪ್ರಭಾ
ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ತೃತಿಯ ಬಾರಿಗೆ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗಂಗಾಧರ ಮಾಹಾಸ್ಬಾಮಿಗಳ ಸ್ಮರಣಾರ್ಥ ಶ್ರೀ ಮ,ನಿ,ಪ್ರ,ಡಾ: ಮಲ್ಲಿಕಾರ್ಜುನ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಡಾ: ಮೂಜಗಂ ಅವಾರ್ಡ್ಸ 2022 ಕಾರ್ಯಕ್ರಮವನ್ನು ಎಸ್,ಡಿ,ಟಿ,ಹೈಸ್ಕೂಲ್ ಮೈದಾನದಲ್ಲಿ ಜರುಗಿತು.
ಈ ಕಾರ್ಯಕ್ರಮಕ್ಕೆ ರಾಪ ಸ್ಟಾರ ಸಿಂಗರ ಬಿಗ್ ಬಾಸ ಜಯಶಾಲಿ ಚಂದನಶೆಟ್ಟಿಯವರು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

ಅಗಲಿದ ಯುವರತ್ನ ಪುನಿತರಾಜಕುಮಾರಗೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿ,ವಿವಿದ ಮಠಾದೀಶರು ಹಾಗೂ ಚಂದನಶೆಟ್ಟಿ ದೀಪ ಬೆಳಗಿಸುವ ಮೂಲಕ ಮೂಜಗಂ ಅವಾರ್ಡ್ಸ್ ಗೆ ಚಾಲನೆ ನೀಡಿ ವೇದಿಕೆಗೆ ಹಾಡುತ್ತ ಕುಣಿಯುತ್ತಾ ಆಗಮಿಸುತಿದ್ದಂತೆ ಅಭಿಮಾನಿಗಳು ಹಾಗೂ ಸೇರಿದ ಜನಸ್ತೋಮ ಕೂಗಾಡಿದರು,

ಇನ್ನು ಈ ಮೂಜಗಂ ಅವಾರ್ಡ್ಸಗೆ ಪ್ರವೇಶ ಪಡೆಯಲು ಪ್ರತಿ ಟಿಕೇಟಗೆ ನೂರು ರೂ ಯಂತೆ ಪ್ರವೇಶ ಫಿ ನಿಗದಿಮಾಡಿದ್ದರು, ಇನ್ನು ವೇದಿಕೆ ಮೇಲೆ ಆಯೋಜಕರಿಗೆ ಹಾಗೂ ಚಂದನಶೆಟ್ಟಿಗೆ ಮಾಲಾರ್ಪಣೆ ಮಾಡಿ ಸತ್ಕರಿಸಿದರು.
ಇನ್ನು ಚಂದನಶೆಟ್ಟಿ ಹಾಡು ಕೇಳಲು ಡ್ಯಾನ್ಸ್ ನೋಡಲು ಸಾವಿರಾರು ಜನ ಸೇರಿದ್ದರು.