ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಣೆ ಮಾಡಲಾಯಿತು
December 25, 2021 2021-12-25 14:45ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಣೆ ಮಾಡಲಾಯಿತು

ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜಯಂತಿ ಆಚರಣೆ ಮಾಡಲಾಯಿತು
ಗೋಕಾಕ : ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಭಾರತದ ಸ್ವಾತಂತ್ರ್ಯೋತ್ತರ ರಾಜಕಾರಣದಲ್ಲಿ ಸದಾ ಹಚ್ಚ ಹಸಿರಾಗಿರುವ ಹೆಸರು. ಅವರೊಬ್ಬ ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್ ಜನನಾಯಕ. ಅಪ್ರತಿಮ ವಾಗ್ಮಿ, ಅದ್ವಿತೀಯ ಸಂಸತ್ ಪಟು ಹಾಗೂ ಕವಿ ಹೃದಯದ ಭಾವಜೀವಿಯಾಗಿದ್ದರು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿ ಅಂಗವಾಗಿ ವಾಜಪೇಯಿ ಅವರ ಭಾವಚಿತ್ರ ಪೂಜಿಸಿ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.
ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ವಿವಿಧ ಮೋರ್ಚಾ ಅಧ್ಯಕ್ಷುರುಗಳಾದ ಲಕ್ಷ್ಮಣ ಖಡಕಭಾಂವಿ, ರಾಜೇಶ್ವರಿ ಒಡೆಯರ, ರವಿ ಮಡ್ಡೆಪ್ಪಗೋಳ, ಮಂಜು ಪ್ರಭುನಟ್ಟಿ, ಸುಭಾಸ ಸನ್ನತಿಪ್ಪಗೋಳ, ಮಂಜುನಾಥ ಮಾವರಕರ, ಕಿರಣ ಡಮಾಮಗರ ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಲಕ್ಕಪ್ಪ ತಹಶೀಲದಾರ, ಲಕ್ಷ್ಮಣ ತಳ್ಳಿ, ಲಕ್ಕಪ್ಪ ಬಂಡಿ, ಬಸವರಾಜ ಹಿರೇಮಠ, ಪರಶುರಾಮ ಭಗತ, ಡಾ.ಸೂರ್ಯವಂಶಿ, ರವಿ ಝಂವರ, ಆನಂದ ಖಾನಪ್ಪನವರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.