Hot News

ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ

IMG-20220206-WA0012.jpg

ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ

ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ. ಇದರಿಂದ ಸಮಾಜದಲ್ಲಿ ಹಲವಾರು ಸುಧಾರಣೆಗಳು ನಡೆದಿವೆ ಎಂದು ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು.

ರವಿವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಗೋಕಾಕ ತಾಲೂಕಾ ಪತ್ರಕರ್ತರ ಸಂಘದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಸಹ ಸಮಾಜದಲ್ಲಿ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದೇ ಸುದ್ದಿಗಳನ್ನು ವರದಿ ಮಾಡುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ವರದಿಗಳನ್ನು ಪ್ರಕಟಿಸಿ ಸಮಾಜ ಸುಧಾರಿಸುವ ದಿಸೆಯಲ್ಲಿ ಪತ್ರಕರ್ತರು ಸಾಗಬೇಕಾಗಿದೆ.
ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕಳೆದ ಹಲವು ದಶಕಗಳಿಂದ ಉತ್ತರ ಕರ್ನಾಟಕ ಅಲಕ್ಷ್ಯ ಗೊಂಡಿದೆ ಎಂಬ ಕೂಗು ಆಗಾಗ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರು ಇದರ ಬಗ್ಗೆ ಬೆಳಕು ಚಲ್ಲುವ ಕಾರ್ಯ ಮಾಡಬೇಕಾದ ಪರಿಸ್ಥಿತಿ ಬಂದೋದಗಿದೆ. ಮಹಾದಾಯಿ ಯೋಜನೆ , ವೃತ್ತಿರಂಗ ಭೂಮಿ ಸೇರಿದಂತೆ ಅನೇಕ ಮಹತ್ತರ ಕಾರ್ಯಗಳಲ್ಲಿ ಉತ್ತಯ ಕರ್ನಾಟಕ ಭಾಗದವರಿಗೆ ಮಲತಾಯಿ ಧೋರಣೆ ತೋರುವ ಸರಕಾರ ಕಣ್ಣತೇರೆಸುವ ಕಾರ್ಯವನ್ನು ಇಂದು ಮಾಧ್ಯಮದರವು
ಮಾಡಿ ಎಲ್ಲರಲ್ಲಿ ಜಾಗೃತಿ ಮೂಡಿಸಿಬೇಕಾಗಿದೆ. ವೈಮನಸ್ಸು ಗಳನ್ನು ಬದಿಗೋತ್ತಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟಲು ಮುಂದಾಗಿ ಮಾನವಿಯತೆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು.
ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಪತ್ರಕರ್ತರು ಸಮಾಜ ಮೂರನೇ ಕಣ್ಣು ಇದ್ದಂತೆ, ಸಮಾಜವನ್ನು ತಿದ್ದುವ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ನಾವೆಲ್ಲರೂ ಸಹ ಕೈ ಜೋಡಿಸಬೇಕು‌. ಶಾಸಕ ರಮೇಶ ಜಾರಕಿಹೊಳಿ ಅವರು ಮುಂದೆ ಬಂದು ಪತ್ರಕರ್ತರಿಗಾಗಿ ನಗರ ಸಭೆ ವತಿಯಿಂದ ಪತ್ರಿಕಾ ಭವನವನ್ನು ನಿರ್ಮಿಸಿಕೊಟ್ಟು ಅವರ ಏಳ್ಗೆಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿ ಶುಭ ಹಾರೈಸಿದರು.
ಪತ್ರಕರ್ತರಾದ ಸಾದಿಕ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಿರಣ ಢಮಾಮಗರ ಸ್ವಾಗತಿಸಿದರು, ಶೃತಿ ಜಾಧವ ನಿರೂಪಿಸಿದರು, ಕೊನೆಯಲ್ಲಿ ಶ್ರೀಧರ ಮುತಾಲಿಕ್ ದೇಸಾಯಿ ವಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಹಿದ ಧಾರವಾಡಕರ, ವಸಂತರಾವ ಹವಾಲದಾರ, ಬಿ.ಪ್ರಭಾಕರ, ಶ್ರೀಕಾಂತ್ ಕುಬಕಡ್ಡಿ, ಭೈರುನಾಥ ಕಾಂಬಳೆ, ಅಡಿವೆಪ್ಪ ತೋಟಗಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಭಾವೈಕತೆಯ ಸಂತ ದಿ.ಇಬ್ರಾಹಿಂ ಸುತ್ತಾರ ಅವರ ಆತ್ಮಶಾಂತಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

Leave your thought here

Your email address will not be published. Required fields are marked *

Categories

Popular tags

Select the fields to be shown. Others will be hidden. Drag and drop to rearrange the order.
 • Image
 • SKU
 • Rating
 • Price
 • Stock
 • Availability
 • Add to cart
 • Description
 • Content
 • Weight
 • Dimensions
 • Additional information
 • Attributes
 • Custom attributes
 • Custom fields
Click outside to hide the compare bar
Compare
Wishlist 0
Open wishlist page Continue shopping