ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
February 9, 2022 2022-02-09 14:31ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ

ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
ಸದ್ವಿನ್ ಕನ್ಸ್ಟ್ರಕ್ಷನ್ ಇಂಜಿನಿಯರ ಕಿರಣ ಇಟ್ನಾಲ ಅವರ ಸುಪುತ್ರ ಸದ್ವಿನ ಅವರ 6ನೇ ಹುಟ್ಟು ಹಬ್ಬದ ನಿಮಿತ್ಯ ಇಂದು ಸುಕ್ಷೇತ್ರ ಶೂನ್ಯ ಸಂಪಾದನಾ ಮಠದಲ್ಲಿ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ಹಾಗೂ ಉದ್ಘಾಟಕರಾಗಿ ಪ.ಪೂ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮೀಜಿಗಳು ಭಾಗವಹಿಸಿ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಿ ಸದ್ವಿನ್ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು.
ಈ ಸಂಧರ್ಭದಲ್ಲಿ ಅತಿಥಿಗಳಾಗಿ ಡಾ.ಉಮರಾಣಿ, ವಿನೋದ ಪಾಟೀಲ,ಮಾಲದಾರ ಇಂಜಿನಿಯರ,ಕೃಷ್ಣಾ ಕುರುಬಗಟ್ಟಿ . ಮಹಾಂತೇಶ ವಾಲಿ.ಶೇಖರ್ ಕಡಿ . ಎಸ್.ಡಿ ಉಜ್ಜನಕೊಪ್ಪ,ಚಿದಾನಂದ ದೇಮಶೆಟ್ಟಿ,ಪ್ರಶಾಂತ ಕುರಬೇಟ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಉಪಸ್ಥಿತರಿದ್ದರು
