ಇಂಗ್ಲೆಂಡ್ ಮಾದರಿ ಅನುಸರಿಸಿ ನೂರಾರು ಕೊರೊನಾ ರೋಗಿಗಳ ಪ್ರಾಣವನ್ನ ಕಾಪಾಡಿದವರು:ಡಾ.ಜಗದೀಶ ಜಿಂಗಿ
December 28, 2021 2021-12-28 22:35ಇಂಗ್ಲೆಂಡ್ ಮಾದರಿ ಅನುಸರಿಸಿ ನೂರಾರು ಕೊರೊನಾ ರೋಗಿಗಳ ಪ್ರಾಣವನ್ನ ಕಾಪಾಡಿದವರು:ಡಾ.ಜಗದೀಶ ಜಿಂಗಿ

ಇಂಗ್ಲೆಂಡ್ ಮಾದರಿ ಅನುಸರಿಸಿ ನೂರಾರು ಕೊರೊನಾ ರೋಗಿಗಳ ಪ್ರಾಣವನ್ನ ಕಾಪಾಡಿದವರು:ಡಾ.ಜಗದೀಶ ಜಿಂಗಿ
ಗೋಕಾಕ: ಇವರು ಗಡಿ ಜಿಲ್ಲೆ ಬೆಳಗಾವಿ ಸರ್ಕಾರಿ ವೈದ್ಯ…ಇಂಗ್ಲೆಂಡ್ ಮಾದರಿ ಅನುಸರಿಸಿ ನೂರಾರು ಕೊರೊನಾ ರೋಗಿಗಳ ಪ್ರಾಣವನ್ನ ಕಾಪಾಡಿದವರು..ಚಿಕ್ಕ ಮಕ್ಕಳು ತಜ್ಞ ವೈದ್ಯರಾದ್ರು ಲಕ್ಷ ಲಕ್ಷ ಸಂಪಾದಿಸುವ ಬದಲಾಗಿ ಸರ್ಕಾರಿ ವೈದ್ಯರಾಗಿ ಜನಸೇವೆ ಜನಾರ್ದನ ಸೇವೆಯಂತೆ ಕಾಯಕದಲ್ಲಿ ದೇವರು ಕಂಡವರೇ ಡಾ.ಜಗದೀಶ್ ಜಿಂಗಿ.
ಹೌದು…ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು ಅಂತಾರಲ್ಲ..ಹಾಗೇಯೇ ಮಹಾಮಾರಿ
ಕೊರೊನಾ ರೋಗದಿಂದ ನೂರಾರು ರೋಗಿಗಳ ಪ್ರಾಣವನ್ನೇ ಕಾಪಾಡಿದ ವೈದ್ಯರಲ್ಲಿ ಇವರು ಒಬ್ಬರು.. ಯಸ್ ಇವರು ಹೆಸರು ಡಾ. ಜಗದೀಶ ಜಿಂಗಿ..ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನಿವಾಸಿ..ಡಾ.ಜಗದೀಶ್ ಮಧ್ಯಮ ಕುಟುಂಬ ವರ್ಗದ ಹಿನ್ನೆಲೆಯಿಂದ ಬಂದವರು..ತಂದೆ ಟೀಚರ್ ಆಗಿದ್ದರು… ಹೀಗಾಗಿ ಜಗದೀಶ್ ಜಿಂಗಿ ಅವರ ಕನಸಿನಂತೆ ಎಷ್ಟೇ ಕಷ್ಟವಾದ್ರು, ಅವರ ಇಚ್ಛೆಯಂತೆ ಶಿಕ್ಷಣ ವನ್ನ ಕೊಡಿಸುತ್ತಾರೆ…ಬೆಳಗಾವಿ ಕೆಎಲ್ಇ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ ಪದವಿ ಪಡೆಯುತ್ತಾರೆ..ಆ ಬಳಿಕ ಕಷ್ಟ ಪಟ್ಟು ಓದಿ ಸರ್ಕಾರಿ ಕೋಟಾದಡಿ ಬೆಳಗಾವಿ ಬೀಮ್ಸ್ ಕಾಲೇಜಿನ ಚಿಕ್ಕ ಮಕ್ಕಳು ತಜ್ಞರ ವಿಭಾಗದ ಎಂಡಿ ಸೀಟ್ ಗಿಟ್ಟಿಸಿಕೊಳ್ಳುತ್ತಾರೆ.. ಮೊದಲಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ವೈದ್ಯರಾಗಿ ಸೇವೆ ಆರಂಭಿಸುತ್ತಾರೆ.. ಆಗ ಆ ಪ್ರಾಥಮಿಕ ಆರೋಗ್ಯ ಕೇಂದ್ರ ಇವರೊಬ್ಬರೇ ಸಿಬ್ಬಂದಿ.. ಉಳಿದಂತೆ ನರ್ಸ್, ಅಟೆಂಡರ್ ಯಾರು ಇರುವುದಿಲ್ಲ. ಆದ್ರು ಸರ್ಕಾರಿ ವೈದ್ಯರಾಗಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ವೈದ್ಯಕೀಯ ಸೇವೆ ಕಲ್ಪಿಸುತ್ತಾರೆ..ಆ ನಂತರ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಾ ವೈದ್ಯಾಧಿಕಾರಿ ಆಗಿ ಕರ್ತವ್ಯ ನಿರ್ವಹಣೆ ಮಾಡ್ತಾರೆ.. ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ಚಿಕ್ಕ ಮಕ್ಕಳು ತಜ್ಞರು ವೈದ್ಯ ರಾಗಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ..ಆದ್ರೆ ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ತಮ್ಮ ಗೋಕಾಕ ಪಟ್ಟಣದಲ್ಲಿ ಮನೆ ಮನೆಗೆ ಹೋಗಿ ರೋಗಿಗಳು ಮತ್ತು ಅವರ ಕುಟುಂಬಸ್ಥರ ಆರೈಕೆ ಮಾಡಿದ್ದಾರೆ.. ಅದರಲ್ಲೂ ಬೆಡ್ ಕೊರತೆ, ಆಕ್ಸಿಜನ್ ಕೊರತೆ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡವರಿಗೆ ಡಾ. ಜಗದೀಶ್ ಜಿಂಗಿ ಧೈರ್ಯ ತುಂಬಿ ವೈದ್ಯಕೀಯ ಉಪಚಾರವನ್ನ ಮಾಡಿದ್ದಾರೆ.
ಅದರಲ್ಲೂ ಡಾ.ಜಗದೀಶ್ ಜಿಂಗಿ ನೇತೃತ್ವದ ವೈದ್ಯಕೀಯ ತಂಡ ಇಂಗ್ಲೆಂಡ್ ಮಾದರಿಯಲ್ಲಿ ಚಿಕಿತ್ಸೆ ನೀಡಿದಕ್ಕೆ ಇಂದು ಸಾವಿರಾರು ಜನರ ಪ್ರಾಣ ಉಳಿದಿದೆ..ವಯಸ್ಸಾದವರು, ಬೇರೆ ಬೇರೆ ಕಾಯಿಲೆ ಯಿಂದ ಬಳಲುತ್ತಿದ್ದ ರೋಗಿಗಳಿಗೆ ಇಂಗ್ಲಿಷ್ ಸರ್ಕಾರ ಮನೆ ಮನೆಗೆ ಹೋಗಿ ಚಿಕಿತ್ಸೆ ನೀಡಲು ಕ್ರಮಕೈಗೊಂಡಿರುತ್ತದೆ..ಅದೇ ಇಂಗ್ಲೆಂಡ್ ಮಾದರಿಯನ್ನ ಗೋಕಾಕ ನಗರದಲ್ಲಿ ಡಾ.ಜಗದೀಶ್ ಜಿಂಗಿ ಅವರು ಪ್ರಾರಂಭಿಸುತ್ತಾರೆ…ಸರ್ಕಾರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಸೇವೆ..ಉಳಿದ ಸಮಯದಲ್ಲಿ ಮನೆಮನೆಗೆ ಹೋಗಿ ಚಿಕಿತ್ಸೆ ಕೊಡ್ತಾರೆ..ಇದರಿಂದ ಇವರು ಆರೈಕೆ ಮಾಡಿದ ನೂರು ರೋಗಿಗಳಲ್ಲಿ ಮೃತಪಟ್ಟರು ಒಬ್ಬರೋ ಇಬ್ಬರೋ ಮಾತ್ರ… ಇನ್ನೂ ಪ್ರಮುಖ ವಾಗಿ ಇವರು ಚಿಕ್ಕ ಮಕ್ಕಳು ತಜ್ಞ ಆಗಿದ್ದರಿಂದ ತಾಯಿ ಮಕ್ಕಳು ಆರೈಕೆ ವಿಶೇಷ ಕಾಳಜಿ ತೋರಿಸಿದ್ದಾರೆ… ಕೊರೊನಾದಿಂದ ಹೇಗೆ ತಾಯಿ ಮಕ್ಕಳು ಇಬ್ಬರೂ ಸುರಕ್ಷಿತ ಇರಬೇಕು ಎಂಬುದನ್ನು ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ..ಹೀಗೆ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಡಾ.ಜಗದೀಶ್ ಜಿಂಗಿ ಅವರು ಹಗಲು ರಾತ್ರಿಯನ್ನದೇ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಇವರ ನಿಸ್ವಾರ್ಥ ಸೇವೆಗೆ ಅನೇಕ ಪುರಸ್ಕಾರ, ಗೌರವಗಳು ಹುಡುಕಿಕೊಂಡು ಬಂದಿವೆ.
ಒಟ್ಟಿನಲ್ಲಿ ಲಕ್ಷ ಲಕ್ಷ ಸಂಪಾದನೆಗೆ ಅವಕಾಶವಿದ್ದರೂ ಡಾ.ಜಗದೀಶ್ ಜಿಂಗಿ ಸರ್ಕಾರಿ ತಜ್ಞ ವೈದ್ಯರಾಗಿ ಬಡವರಿಗೆ ಸೇವೆ ನೀಡುತ್ತಿದ್ದಾರೆ..ಕೋವಿಡ್ ಸಂದರ್ಭದಲ್ಲಿ ಇವರು ಮನೆ ಮನೆಗೆ ಹೋಗಿ ನೀಡಿದ ವೈದ್ಯಕೀಯ ಚಿಕಿತ್ಸೆಯಿಂದ ಇವತ್ತು ನೂರಾರು ಜನರ ಪ್ರಾಣ ಉಳಿದಿದೆ