ಅಶ್ವಥನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು:ಅಶೋಕ ಪೂಜಾರಿ
January 5, 2022 2022-01-05 13:31ಅಶ್ವಥನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು:ಅಶೋಕ ಪೂಜಾರಿ

ಅಶ್ವಥನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು:ಅಶೋಕ ಪೂಜಾರಿ
ಗೋಕಾಕ: ಇತ್ತೀಚೆಗೆ ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಸರಕಾರದ ಹಿರಿಯ ಸಚಿವರುಗಳು ಮತ್ತು ಸರ್ವಪಕ್ಷಗಳ ಪ್ರಮುಖ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದ ಮೂರ್ತಿಗಳ ಅನಾವಣರಣ ಹಾಗೂ ವಿವಿಧ ಉದ್ದೇಶಗಳಿಂದ ಹಮ್ಮಿಕೊಂಡಿದ್ದ ಸರಕಾರದ ಅಧಿಕೃತ ಸಮಾರಂಭದಲ್ಲಿ ಸರಕಾರದ ಹಿರಿಯ ಸಚಿವ ಅಶ್ವಥನಾರಾಯಣ ರವರು ಸರಕಾರಿ ಸಮಾರಂಭವೆಂಬ ಪರಿವೆ ಇಲ್ಲದೇ ಸಬ್ಯತೆಯನ್ನು ಮೀರಿದ ಪದ ಬಳಸಿ ವೈಯಕ್ತಿಕ ನಿಂದನೆಯ ಸ್ವರೂಪದ ಭಾಷನವನ್ನು ಮಾಡಿರುವದು ಸರಕಾರಿ ಸಮಾರಂಭದ ಘನತೆಗೆ ಮಾಡಿದ ಅಪಚಾರವಾಗಿತ್ತಲ್ಲದೇ ಮುಖ್ಯಮಂತ್ರಿಗಳಿಗೂ ಸಹ ಮುಜುಗರಕ್ಕಿಡು ಮಾಡಿದ್ದು, ಜವಾಬ್ದಾರಿಯುತ ಸಚಿವರ ಹುದ್ದೆಗೆ ಶೋಭೆತರದ ಕ್ರಮವಾಗಿದೆ ಎಂದು ಕಾಂಗ್ರೇಸ್ ಪಕ್ಷದ ಮುಖಂಡ ಅಶೋಕ ಪೂಜಾರಿ ಖೇಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಇಂದು ತಮ್ಮ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು ರಾಮನಗರ ಜಿಲ್ಲೆಗೂ ಸಚಿವ ಅಶ್ವಥನಾರಾಯಣ ರವರಿಗೂ ವೈಯಕ್ತಿಕ ಸಂಬಂಧವೇ ಇಲ್ಲದಾಗ ಆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಮಾಡಿದ ಎಲ್ಲ ಚುನಾಯಿತ ಪ್ರತಿನಿಧಿಗಳ ಕಾರ್ಯಗಳನ್ನೇ ಪ್ರಶ್ನಾರ್ತಕ ಭಾವನೆಯಿಂದ ಕೆಣಕಿದ ಸಚಿವರ ಭಾಷಣದ ಹೇಳಿಕೆಗಳು ಸೌಜನ್ಯತೆಯ ಎಲ್ಲೆ ಮೀರಿ ಹೋಗಿ ಜಿಲ್ಲೆಯ ಜನರ ಭಾವನೆಗಳಿಗೆ ಚ್ಯುತಿ ಬಂದಾಗ ವೇದಿಕೆಯ ಮೇಲಿದ್ದ ರಾಮನಗರದ ಸಂಸದ ಡಿ.ಕೆ. ಸುರೇಶ ರವರು ಸ್ವಾಭಿಮಾನದ ಸಂಕೇತವಾಗಿ ಸಹಜ ಮನೋಭಾವನೆಯಿಂದ ಅವರ ಭಾಷಣಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಅಶ್ಲೀಲ ಪದ ಬಳಕೆಯನ್ನು ಖಂಡಿಸಿರುವದರಲ್ಲಿ ತಪ್ಪೇನಿದೇ? ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಸಾಂದರ್ಭಿವಾಗಿ ನಡೆದ ಈ ಘಟನೆಯನ್ನು ಭಾರತೀಯ ಜನತಾ ಪಕ್ಷ ರಾಜಕೀಕರಣಗೊಳಿಸದೇ ಇರುವದೇ ಸೌಜನ್ಯದ ರಾಜಕಾರಣವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಘಟನೆ ನಡೆದ ದಿನ ಗೋಕಾಕದ ಕೆಲ ಬಿ.ಜೆ.ಪಿ. ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಕುರಿತು ಪ್ರತಿಕ್ರಯಿಸಿದ ಅವರು ಈಗ ನಗರದಲ್ಲಿ ಪ್ರತಿಭಟನೆ ಮಾಡಿದವರು ಈಗ ಭಾರತೀಯ ಜನತಾ ಪಕ್ಷಕ್ಕೆ ತೋರಿಸುತ್ತಿರುವ ಇದೇ ಬದ್ಧತೆಯನ್ನು ಇತ್ತೀಚೆಗೆ ನಡೆದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಪರವಾಗಿ ತೋರಿಸಿದ್ದರೆ ದೊಡ್ಡ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಸೋಲೇ ಆಗುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ಹೇಳಿ ಪಕ್ಷದ ಪ್ರತಿಭಟನೆಗಳು ಯಾರದೋ ವೈಯುಕ್ತಿಕ ನಿಂದನೆಗೆ ಅಥವಾ ಮತ್ತೊಬ್ಬರ ಓಲೈಕೆಗೆ ಆಗಿರಬಾರದೆಂದು ಕಿವಿಮಾತು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಜಾಕೀರ ನಧಾಪ, ಅರಭಾಂವಿ ಮಂಡಲ ಅಧ್ಯಕ್ಷ ಗುರುರಾಜ. ಆರ್. ಪೂಜೇರಿ ವಕೀಲರು, ಲಗಮಣ್ಣಾ ಕಳಸನ್ನವರ, ಚನ್ನಬಸು ರುದ್ರಾಪೂರ, ಮುಸ್ತಾಕ ಪುಲತಾಂಬೆ, ಅಸದಖಾನ ಜಗದಾಳ, ನಿಂಗಪ್ಪ ಅಮ್ಮಿನಭಾಂವಿ, ಸಿದ್ದಪ್ಪ ಶಿರಸಂಗಿ, ಮುತ್ತೆಪ್ಪ ಕಾಗಲದಾರ ಮುಂತಾದವರು ಉಪಸ್ಥಿತರಿದ್ದರು.