Issues Relate to Aadhar Center at Gokak Post Office

ಗೋಕಾಕ ನಗರದ ಸುತ್ತ ಮುತ್ತಲಿನ ಹಳ್ಳಿಯ ಜನರು ಸೇರಿದಂತೆ ಗೋಕಾಕ ನಗರದ ಜನರು ಆಧಾರ್ ಕಾರ್ಡ್ ತಿದ್ದುಪಡಿ ಗಾಗಿ ಅಲೆದಾಟ… ಇದರ ಬಗ್ಗೆ ಹಲೋ ಗೋಕಾಕ ಹಲವು ಬಾರಿ ಪೋಸ್ಟ್ ಮಾಡಿದ್ದು


ಗೋಕಾಕ ನಗರದ ಸುತ್ತ ಮುತ್ತಲಿನ ಜನರು ನಗರದ ಅಂಚೆ ಕಚೇರಿ ಮುಂದೆ ರಾತ್ರಿ ಯಿಡಿ ಸರತಿ ಹಚ್ಚಿ ಅಲ್ಲಿಯೇ ಮಲಗಿ ಆಧಾರ್ ತಿದ್ದುಪಡಿ ಹಾಗೂ ಆಧಾರ್ ಸೇವೆಗಳನ್ನು ಪಡೆಯಬೇಕಾಗಿದೆ ಅಂಚೆ ಕಚೇರಿಯಲ್ಲಿ ದಿನಕ್ಕೆ ಕೇವಲ 20 ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿರುವುದರಿಂದ ಈ ತೊಂದರೆ ಉಂಟಾಗುತ್ತಿದ್ದು ಆಧಾರ್ ತಿದ್ದುಪಡಿಗೆ 2 ರಿಂದ 8 ತಿಂಗಳು ಗಳ ಕಾಲ ನಂಬರ್ ಹಚ್ಚ ಬೇಕಾಗಿದೆ ಕೆಲವೊಂದು ಬಾರಿ ರಾತ್ರಿ ಇಡೀ ಮಲಗಿ ನಂಬರ್ ಹಚ್ಚಿದರು ನಂಬರ್ ಸಿಗುವದಿಲ್ಲ, ಕೆಲವೊಂದು ಸಲ ನಂಬರ್ ಸಿಕ್ಕರೂ ಕಾಗದ ಪತ್ರಗಳು ಸರಿಯಾಗಿಲ್ಲ ನಾಳೆ ಬನ್ನಿ ಎಂದು ಅಧಿಕಾರಿಗಳು ಹೇಳುತ್ತಾರೆ ಇದರಿಂದ ಉದ್ಯೋಗ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ
ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ತಕ್ಷಣ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಗೋಕಾಕ ಪೋಸ್ಟ್ ಮೂಲಕ ಮನವಿ ಮಾಡುತ್ತಿದೆ.